Duration 7:1

ಸಂಗೀತ ಪ್ರಣತಿ 71- ತಾಯಿಗೆ | ಜಿ.ಎಸ್. ಶಿವರುದ್ರಪ್ಪ | ಗಾಯನ | ಮಾಲಿನಿ ಕೇಶವ ಪ್ರಸಾದ್। ಸಂಗೀತ।ಚಿದಂಬರ ಕಾಳಮಂಜಿ

Published 21 Sep 2021

ಸಂಗೀತ ಪ್ರಣತಿ #71- ತಾಯಿಗೆ ಒಂದು ಸುಂದರ ಹೂವನರಳಿಸಿದ ಲತೆಯಂತೆ ರಚನೆ ಜಿ.ಎಸ್. ಶಿವರುದ್ರಪ್ಪ ಗಾಯನ ಮಾಲಿನಿ ಕೇಶವ ಪ್ರಸಾದ್ ಸಂಗೀತ ಚಿದಂಬರ ಕಾಳಮಂಜಿ ********** ಒಬ್ಬ ತಾಯಿ ಮಗುವನ್ನು ಮಮತೆಯಿಂದ ಮುದ್ದು ಮಾಡುವ ಅನನ್ಯ ಸಂಭ್ರಮದ ವರ್ಣನೆ ಇದು *********** ಒಂದು ಸುಂದರ ಹೂವನರಳಿಸಿದ ಲತೆಯಂತೆ ನೀನಿರುವೆ ನಸುನಗುವ ಕಂದನೊಡನೆ ಒಂದೆ ಬೆಳ್ಮುಗಿಲನ್ನು ಮಡಿಲಲ್ಲಿ ಹಿಡಿದಿರುವ ಗಿರಿಕನ್ಯೆಯಂದದಲಿ ತೋರುತಿರುವೆ 'ನನ್ನ ಚಿನ್ನ ಬಂಗಾರಿ ಅಪರಂಜಿ ಕಟ್ಟಾಣಿ' ಎಂದು ಮಗುವನ್ನು ಕರೆದುದೆನಿತು ಸಲವೋ! ಎದೆಯ ಸಿರಿಯನ್ನೆಲ್ಲ ಸವಿಮುತ್ತಿನಲಿ ತುಂಬಿ ಎರೆದನಿತು ತಣಿವಿಲ್ಲ; ಏನು ಒಲವೋ ! ತನ್ನಿಷ್ಟ ದೇವತೆಗೆ ಪೂಜೆಗೈಯುತ ದಿನವು ತನ್ನ ತಾನೇ ಮರೆವ ಭಕ್ತನಂತೆ ಅದರ ಸಿಂಗಾರದಲಿ ನಿನ್ನ ನೀನೇ ಮರೆತೆ ಬೊಂಬೆಯಾಟದೊಳಿರುವ ಹಸುಳೆಯಂತೆ ! ನಿನ್ನ ಕಣ್ಣೊಳು ಹೊಳೆವ ವಾತ್ಸಲ್ಯಚಂದ್ರಿಕೆಯೊಳದ್ದಿ ಶಿಶು ನಗುತಲಿದೆ ಚಿಕ್ಕೆಯಂತೆ ಜಗವನಾಳುವ ಒಲವು ಮೈದೋರಿದೀ ಪರಿಗೆ ಬೆರಗು ಮೌನದೊಳಿರುವೆ ಬಾನಿನಂತೆ ******************* ಚಿದಂಬರ ಕಾಳಮಂಜಿ ಸಾರಥ್ಯದ “ನಮ್ಮನೆ ಸಂಗೀತ ಪ್ರಣತಿ” ಬಳಗದ 70 ಕ್ಕೂ ಹೆಚ್ಚು ವೈವಿಧ್ಯಮಯ ಭಾವಗೀತೆಗಳನ್ನು ಕೇಳಲು ಈ ವಾಹಿನಿಗೆ ಭೇಟಿಕೊಡಿ Subscribe , Share and Comment www.youtube.com/chidvijay www.facebook.com/chidvijay

Category

Show more

Comments - 14